ಬಾಲ ವಿಕಾಸ - ಜ್ಞಾನ ವಿಕಾಸ | ಒಂದು ಕಿರುಚಿತ್ರ | Balvikas - Jnanavikas | A short film
Published on August 16, 2026 06:17 PM
Thematic Presentations
"ಬಾಲ ವಿಕಾಸ - ಜ್ಞಾನ ವಿಕಾಸ" ಎಂಬ ಈ ಕಿರುಚಿತ್ರದಲ್ಲಿ ಬರುವ ಎರಡು ಕುಟುಂಬಗಳ ಕಥೆಗಳು ನಮ್ಮೆಲ್ಲರ ದಿನನಿತ್ಯದ ಜೀವನದಲ್ಲಿ ಕಾಣಬಹುದಾದ ಸಂಗತಿಯಾಗಿದೆ. ನಾವೆಲ್ಲರೂ ಇಂದು ಕೇವಲ ಶಿಕ್ಷಣಕ್ಕೆ ಬೆಲೆ ಕೊಡುತ್ತಿದೇವೆಯೇ ಹೊರತು ಮೌಲ್ಯಾಧಾರಿತ ಶಿಕ್ಷಣದ ಕಡೆಗೆ ಗಮನ ಹರಿಸುತ್ತಿಲ್ಲ .
ಶ್ರೀ ಸತ್ಯಸಾಯಿ ಬಾಬಾರವರು ಹೇಳುವಂತೆ "ಚಾರಿತ್ರ್ಯ ನಿರ್ಮಾಣವೇ ಶಿಕ್ಷಣದ ಪರಮ ಗುರಿ." ಚಾರಿತ್ರ್ಯ ನಿರ್ಮಾಣದಲ್ಲಿ ಬಾಲವಿಕಾಸದ ಪಾತ್ರ ಮತ್ತು ಅದರ ಮಹತ್ವ ಏನೆಂಬುದನ್ನು ಸಾರುವ ಒಂದು ಸಣ್ಣ ಪ್ರಯತ್ನವನ್ನು ಇದೇ ಬಾಲವಿಕಾಸದಿಂದ ಕಲಿತ ತೀರ್ಥಹಳ್ಳಿಯ ಹಳೆಯ ವಿದ್ಯಾರ್ಥಿಗಳು ಮಾಡಿರುತ್ತಾರೆ.